ರಾಷ್ಟ್ರೀಯ ಏಕೀಕರಣದ ಮಾರ್ಗದಲ್ಲಿ ದೊಡ್ಡ ಮುಳುವಾಗಿ ಹಾಗೂ ಕಾಶ್ಮೀರದ ನಿರಂತರ ಗಲಭೆಗಳಲ್ಲಿ ಮುಖ್ಯ ಪಾತ್ರ ಆರ್ಟಿಕಲ್ 370ರದ್ದೇ ಎಂಬುದನ್ನು ಬಿಜೆಪಿ ಪಕ್ಷವು ಸರಿಯಾಗಿ ಅರ್ಥೈಸಿಕೊಂಡಿದೆ. ಅದರಂತೆ ಹಲವು ವರ್ಷಗಳಿಂದ ಆರ್ಟಿಕಲ್ 370ಇದನ್ನು ಸಂವಿಧಾನದಿಂದ ತೆಗೆದುಹಾಕಬೇಕಾಗಿ ಪಕ್ಷವು ಬೇಡಿಕೆ ಇಡುತ್ತಾ ಬಂದಿದೆ. ಇತ್ತೀಚಿನ 2014 ಚುನಾವಣಾ ಪ್ರಣಾಳಿಕೆಯಲ್ಲಿ ಕೂಡ ಇದೇ ಬೇಡಿಕೆಯನ್ನು ಮುಂದಿಡಲಾಗಿದೆ. ಆದ್ದರಿಂದ ಈ ಕಾನೂನನ್ನು ಹಿಂದಕ್ಕೆ ಪಡೆಯುವ ಹೊರತು ಕಾಶ್ಮೀರ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ.

ಆರ್ಟಿಕಲ್ 370 ಇದರ ಜೊತೆಗೆ ವಿಧಾನಸಭಾ ಕ್ಷೇತ್ರಗಳ ವಿಂಗಡನೆಯಲ್ಲಿ ಆಗಿರುವ ತಾರತಮ್ಯದಿಂದ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಮಹತ್ವ ದೊರಕಿ ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳು ಆ ಪ್ರದೇಶದಿಂದಲೇ ಬರುವಂತೆ ಆಗಿದೆ. ಇದರಿಂದ ಜಮ್ಮು ಮತ್ತು ಲಡಾಕ್ ಪ್ರದೇಶಗಳು ನಿರ್ಲಕ್ಷೆಗೆ ಒಳಗಾಗಿವೆ. ಇದಲ್ಲದೆ ಸಾಂಸ್ಕೃತಿಕವಾಗಿ ಕೂಡ ಮೂರು ಪ್ರದೇಶಗಳು ಭಿನ್ನವಾಗಿವೆ. ಆದ್ದರಿಂದ ಜಮ್ಮು ಮತ್ತು ಲಡಾಕ್ ಪ್ರದೇಶಗಳ ಧಾರ್ಮಿಕ ಹಾಗೂ ಸಾಂಸ್ಕೃತಿಕ ವ್ಯವಸ್ಥೆಗಳ ನಾಶವಾಗುವ ಆತಂಕ ಹೆಚ್ಚಾಗುತ್ತಿದೆ. ಕಾಶ್ಮೀರ ಪ್ರದೇಶದಲ್ಲಿ ಕಾಶ್ಮೀರಿ ಹಿಂದೂಗಳ ಅವಸ್ಥೆಯನ್ನು ಈ  ಸಂದರ್ಭದಲ್ಲಿ  ನೆನಪಿಸಿಕೊಳ್ಳಬಹುದು. ಆದ್ದರಿಂದ ಜಮ್ಮು ಮತ್ತು ಲಡಾಕ್ ಪ್ರದೇಶಗಳು ತಮ್ಮ ತಮ್ಮ ಪ್ರಜಾತಾಂತ್ರಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಗಳನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ರಾಜ್ಯವನ್ನು ಮೂರು ಭಾಗವನ್ನಾಗಿ ಮಾಡುವುದು ಅತ್ಯಗತ್ಯವಾಗಿದೆ.

ಕಾಶ್ಮೀರದ ಹಿಂದೂಗಳು ಅನುಭವಿಸಿದ ಸಾಮೂಹಿಕ ನಾಶ ಪ್ರಕ್ರಿಯೆ ಮತ್ತೆ ಮರಳಿ ಬಾರದಂತೆ ಖಾತ್ರಿ ಮಾಡಿಕೊಳ್ಳಲು ಈ ಕೆಳಗಿನ ಬೇಡಿಕೆಗಳನ್ನು ನಮ್ಮ ಗುಂಪು ಮುಂದಿಡುತ್ತದೆ.

(i) 2014ನೆಯ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಆಶ್ವಾಸನೆ ನೀಡಿರುವಂತೆ ಸಂವಿಧಾನದಿಂದ ಆರ್ಟಿಕಲ್ 370 ಇದನ್ನು ರದ್ದುಗೊಳಿಸಿ ಸಂವಿಧಾನ (ಜಮ್ಮು ಮತ್ತು ಕಾಶ್ಮೀರ ಇದಕ್ಕೆ ಅನ್ವಯ) ಆದೇಶ 1954, ಇದನ್ನು ಹಿಂದಕ್ಕೆ ಪಡೆಯಬೇಕು. ಈ ಎರಡರ ಸಹಕಾರದೊಂದಿಗೆ ಜಾರಿಗೊಳಿಸಲಾಗಿರುವ ಆರ್ಟಿಕಲ್ 35A ಇದನ್ನು ಕೂಡ ಹಿಂದಕ್ಕೆ ಪಡೆಯಬೇಕು.

(ii)  ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಕಾಶ್ಮೀರ, ಲಡಾಕ್ ಮತ್ತು ಜಮ್ಮುಎಂಬ ಮೂರು ಪ್ರತ್ಯೇಕ ರಾಜ್ಯಗಳನ್ನು ಸ್ಥಾಪಿಸಬೇಕು.

(iii) ಹೊಸದಾದ ಕಾನೂನೊಂದನ್ನು ಜಾರಿಗೆ ತಂದು ಕಾಶ್ಮೀರಿ ಹಿಂದೂಗಳು ಆಂತರಿಕ-ನಿರಾಶ್ರಿತರು ಎಂಬ ಸ್ಥಾನವನ್ನು ನೀಡಿ ಅದಕ್ಕೆ ತಕ್ಕಂತಹ ಸೌಲಭ್ಯಗಳನ್ನು ಒದಗಿಸಬೇಕು. ತಮ್ಮ ತಾಯ್ನಾಡಾದ ಕಾಶ್ಮೀರದಲ್ಲಿ ಪುನಃ ವಾಸಿಸುವ ಅವಕಾಶ ದೊರಕುವ ತನಕ ಈ ಸೌಲಭ್ಯಗಳನ್ನು ಮುಂದುವರಿಸಬೇಕು.

Leave a Reply