ಹಸು ಮತ್ತು ಇತರೆ ಜಾನುವಾರುಗಳ ಪ್ರಾಮುಖ್ಯತೆ ಧಾರ್ಮಿಕ ಕಾರಣಗಳಿಗೆ ಮಾತ್ರ ಸೀಮಿತವಲ್ಲದೇ ಇತರ ಕಾರಣಗಳಿಂದಾಗಿಯೂ ಮಹತ್ವದ್ದಾಗಿದೆ. ಜಾನುವಾರುಗಳು ನಮ್ಮ ದೇಶದ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮುಖ್ಯ ಅಂಗವಾಗಿವೆ. ವರ್ಷದಿಂದ ವರ್ಷಕ್ಕೆ ತೀಕ್ಷ್ಣ ಗತಿಯಲ್ಲಿ  ಭಾರತದಿಂದ ರಫ್ತು ಮಾಡಲಾಗುತ್ತಿರುವ ಮಾಂಸ ಹಾಗೂ ಗೋಮಾಂಸದ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ 2017- 18 ಸಾಲಿನಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶ ಎಂಬ ಕೆಟ್ಟ ಬಿರುದು ನಮ್ಮ ದೇಶಕ್ಕೆ ಲಭ್ಯವಾಗಿದೆ. ಈ ರಫ್ತಿನ ವ್ಯವಹಾರಕ್ಕೆ ಕೇಂದ್ರ ಸರಕಾರ ಉತ್ತೇಜನ ನೀಡುತ್ತಿದ್ದು  ಇದರಿಂದಾಗಿ ದೇಶದ ಆಂತರಿಕ ಮಾರುಕಟ್ಟೆಗಳಲ್ಲಿ ಮಾಂಸದ ಬೆಲೆ ಅತಿ ಹೆಚ್ಚಾಗಿದೆ. ಇದರಿಂದಾಗಿ ಮಾಂಸ ಮತ್ತು ಗೋಮಾಂಸದ ಬೇಡಿಕೆ ಬೆಳೆದು ನಿಂತಿದೆ. ಇದರೊಂದಿಗೆ ಜಾನುವಾರು ಕಳವು, ಅನಧಿಕೃತ ಗೋವಧೆ ಮತ್ತು ಪಕ್ಕದ ದೇಶಗಳಿಗೆ ಅನಧಿಕೃತವಾಗಿ ಜಾನುವಾರು ಸಾಗಾಣಿಕೆ ಇವೆಲ್ಲ ಕೂಡ ತೀವ್ರವಾಗಿ ಹೆಚ್ಚಾಗಿದೆ. ನಮ್ಮ ದೇಶದ 29 ರಾಜ್ಯಗಳಲ್ಲಿ 20 ರಾಜ್ಯಗಳು ಹಸು ಮತ್ತು ಸಂಬಂಧಿತ ಜಾನುವಾರುಗಳ ವಧೆಯನ್ನು ನಿಷೇಧಿಸುವ ಕಾನೂನುಗಳನ್ನು ಜಾರಿಗೊಳಿಸಿವೆ. ಹೀಗಿದ್ದರೂ ಮೇಲೆ ತಿಳಿಸಿರುವಂತಹ ಪರಿಸ್ಥಿತಿ ನಮ್ಮ ಎದುರಾಗಿದೆ.

ನಮ್ಮ ಗ್ರಾಮೀಣ ಪ್ರದೇಶದ ಜನರಿಗೆ ಹಸುಗಳ ಮೇಲೆ ಧಾರ್ಮಿಕ ನಂಟಿದೆ. ಅಲ್ಲದೆ ಹಸುಗಳಿಂದ ಅವರಿಗೆ ಆರ್ಥಿಕ ಬೆಂಬಲ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರಗಳು ಗೋವುಗಳ ಕಳ್ಳಸಾಗಾಣಿಕೆ ನಿಲ್ಲಿಸುವ ದಿಶೆಯಲ್ಲಿ ವಿಫಲವಾಗಿವೆ. ಇದರಿಂದಾಗಿ ಸ್ಥಳೀಯ ಗುಂಪುಗಳು ಕಳ್ಳ ಸಾಗಾಣಿಕೆ ಮಾಫಿಯಾದವರನ್ನು ಹತೋಟಿ ಮಾಡುವ ಕೆಲಸಕ್ಕೆ ತಾವೇ ಇಳಿಯುವಂತಾಗಿದೆ. ಇಂತಹ ಪ್ರಯತ್ನಗಳಿಗೆ ಜಾನುವಾರು ಮಾಫಿಯಾದವರಿಂದ ವಿರೋಧ ಒದಗುತ್ತಿದ್ದು ಕಾನೂನು ಮತ್ತು ವ್ಯವಸ್ಥೆಯ ಸಮಸ್ಯೆ ಎದ್ದು ನಿಂತಿದೆ. ಇದನ್ನು ಮಾಫಿಯಾ ಪರವಾಗಿ ಲಿಂಚಿಂಗ್ (lynching) ಎಂದು ನಾಮಕರಣ ಮಾಡಲಾಗಿದೆ. ಈ ರೀತಿಯ ವಿಕೃತ ಸೃಷ್ಟಿಗಳಿಂದ ಮಾಫಿಯಾದವರ ಹಣ ಮತ್ತು ಜನರ ತಾಕತ್ತು ಎಷ್ಟಿದೆ ಎಂಬ ಅರಿವಾಗುತ್ತದೆ. ದೇಶದ ಹೆಸರನ್ನು ಹಾಳು ಮಾಡ ಹೊರಟಿರುವ ಈ ದುರ್ಪ್ರಚಾರ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂದರೆ ನಮ್ಮ ದೇಶದ ಸುಪ್ರಿಂಕೋರ್ಟ್ ಸರಕಾರಕ್ಕೆ ಲಿಂಚಿಂಗ್ ವಿರೋಧಿ ಕಾನೂನು ಒಂದನ್ನು ಜಾರಿಗೆ ತರಲು ಸೂಚಿಸಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಮೂಲ ನಮ್ಮ ಸರಕಾರ. ಆದಕ್ಕೆ ಸಂಬಂಧಪಟ್ಟ ಕಾರಣಗಳು ಈ ಕೆಳಗಿನಂತಿವೆ:

(i) ನಮ್ಮ ಸಂವಿಧಾನದ ಆರ್ಟಿಕಲ್ 48 ಇದನ್ನು ಸಂಪೂರ್ಣವಾಗಿ ಕಡೆಗಣಿಸಿ ಕೇಂದ್ರ ಸರಕಾರವು ಗೋಮಾಂಸ ಮತ್ತು ಮಾಂಸದ ರಫ್ತಿಗೆ ಅನೇಕ ರೀತಿಯ ಉತ್ತೇಜನಕಾರಿ ಹೆಜ್ಜೆಗಳನ್ನು ಕೈಗೊಂಡಿದೆ. ಇದರಿಂದಾಗಿಯೇ ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚು ರಫ್ತು ಮಾಡುವ ದೇಶ ಎಂಬ ಪಟ್ಟ ಪಡೆದಿದೆ.

(ii) ಎರಡನೆಯದಾಗಿ ಎಲ್ಲಾ ರಾಜ್ಯ ಸರಕಾರಗಳು ಗೋಹತ್ಯೆಯ ವಿರುದ್ಧದ ಕಾನೂನುಗಳನ್ನು ಪಾಲಿಸುವುದರಲ್ಲಿ ವಿಫಲವಾಗಿವೆ.

ಆದ್ದರಿಂದ ಸಾಮಾಜಿಕ ಕಲಹಗಳನ್ನು ತಡೆಯುವ ದೃಷ್ಟಿಯಿಂದ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮಾಂಸ ಹಾಗೂ ಗೋಮಾಂಸಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸತಕ್ಕದ್ದು. ಇದರೊಂದಿಗೆ ಸರಕಾರವು ಸಂವಿಧಾನದ ಆರ್ಟಿಕಲ್ 48 ಇದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಮರೆಯಬಾರದು. ಅಷ್ಟೇ ಅಲ್ಲದೆ ಭಾರತೀಯ ನಾಗರೀಕತೆಯ ದೃಷ್ಟಿಯಿಂದ ಹಸು ಮತ್ತು ಇತರೆ ಜಾನುವಾರುಗಳ ಸಂರಕ್ಷಣೆಗಾಗಿ ತೊಟ್ಟಿರುವ ಪಣವನ್ನು ಮರೆಯಬಾರದು.

ಕೇಂದ್ರ ಸರಕಾರವು ಈ ಕೂಡಲೇ ಕೆಳಗೆ ಸೂಚಿಸಿರತಕ್ಕ ಕಾರ್ಯಗಳನ್ನು ಕೈಗೆ ತೆಗೆದುಕೊಳ್ಳಬೇಕು:

(i) ಜಾನುವಾರುಗಳ, ಮಾಂಸ ಮತ್ತು ಗೋಮಾಂಸಗಳ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವುದು.

(ii) “ಕೃಷಿ ಮತ್ತು ಸಂಸ್ಕೃತ ಆಹಾರ ಪದಾರ್ಥಗಳ ರಫ್ತು ಅಭಿವೃದ್ಧಿ ನಿಗಮ ಕಾನೂನು 1985” ಈ ಕಾಯ್ದೆಯನ್ನು ತಿದ್ದುಪಡಿ ಮಾಡಿ “ಮಾಂಸ, ಮಾಂಸ ಪದಾರ್ಥಗಳು ಮತ್ತು ಗೋಹತ್ಯೆ ಕೇಂದ್ರಗಳು” ಎಂಬ ಪದಗಳನ್ನು ತೆಗೆದುಹಾಕಬೇಕು.

(iii) ಬಿಜೆಪಿ ಪಕ್ಷವು ತನ್ನ 2014ನೆಯ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿರುವಂತೆ ಭಾರತಾದ್ಯಂತ ಲಾಗುವಾಗುವಂತಹ “ಕೃಷಿ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ” ಇದನ್ನು ತರಬೇಕು. ಈ ಹೊಸ ಕಾನೂನು “ಛತ್ತಿಸ್ಗಡ  ಕೃಷಿ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2004” ಇದರ ಮಾದರಿಯಲ್ಲಿ ಇರತಕ್ಕದ್ದು. ಕೃಷಿ ಮತ್ತು ಜಾನುವಾರು ಇಲಾಖೆ ಸಂವಿಧಾನದ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜಂಟಿ ಪಟ್ಟಿಯಲ್ಲಿ ಇರುವ ಕಾರಣ ಈ ರೀತಿಯ ಕಾನೂನನ್ನು ತರುವುದರಲ್ಲಿ ಯಾವುದೇ ರೀತಿಯ ತೊಡಕು ಇರುವುದಿಲ್ಲ.

ಮೊದಲಿನ ಬೇಡಿಕೆಗಳಲ್ಲಿ ಕೇಳಿಕೊಂಡಿರುವಂತೆ ಈ ಕಾನೂನನ್ನು ಕೂಡ ಮುಂಬರುವ ಸಂಸತ್ ಅಧಿವೇಶನದಲಲ್ಲೇ ಪಾಸು ಮಾಡಬೇಕು. ಅಥವಾ ಇದರ ಜಾಗದಲ್ಲಿ ಸುಗ್ರೀವಾಜ್ಞೆಯೊಂದನ್ನು ತರಬೇಕು.