ಭಾರತೇತರ ದೇಶಗಳಲ್ಲಿ ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಕ್ಖರು ಧಾರ್ಮಿಕ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಈ ಕಾಲದ ಕಟುಸತ್ಯಗಳಲ್ಲಿ ಒಂದು. ಭಾರತ ಭೂಮಿ ಹಿಂದೂ, ಬೌದ್ಧ, ಜಿನ ಹಾಗೂ ಸಿಖ್ ಸಂಪ್ರದಾಯಗಳಿಗೆ ಜನ್ಮಸ್ಥಾನವಾದ್ದರಿಂದ ಹಲ್ಲೆ ಹಾಗೂ ಅತ್ಯಾಚಾರಕ್ಕೆ ಒಳಗಾದ ಈ ಧರ್ಮಗಳ ಅನುಯಾಯಿಗಳು ಯಾವುದೇ ದೇಶದಲ್ಲಿದ್ದರೂ ಕೂಡ ಭಾರತದ ಆಶ್ರಯವನ್ನು ಯಾಚಿಸಿ ಬರುತ್ತಾರೆ.

ಆದರೆ ಚಿಂತೆಗೀಡಾಗುವ ನೈಜಸ್ಥಿತಿ ಏನೆಂದರೆ ಈ ರೀತಿ ಧಾರ್ಮಿಕ ಹಲ್ಲೆಯನ್ನು ತಪ್ಪಿಸಿಕೊಂಡು ಬರುವ ಹಿಂದೂಗಳು ಪೌರತ್ವವಿಲ್ಲದ ಕಾರಣ ನಿರಾಶ್ರಿತರ ತಂಗುದಾಣಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಜನರಿಗೆ ತಮ್ಮ ಮೂಲ ದೇಶಕ್ಕೆ ಹಿಂದಿರುಗುವ ಅವಕಾಶ ಇಲ್ಲವೇ ಇಲ್ಲ. ಹಾಗೇನಾದರೂ ಪ್ರಯತ್ನ ಮಾಡಿದರೆ ಅವರುಗಳು ತಮ್ಮ ಧರ್ಮವನ್ನು ಅಥವಾ ತಮ್ಮ ಜೀವವನ್ನೇ ಕಳೆದುಕೊಳ್ಳಬೇಕಾದೀತು. ಭಾರತ ಸರಕಾರವು ನಾಗರಿಕ ಜವಾಬ್ದಾರಿಯಿಂದ ಈ ರೀತಿ ವಲಸೆ ಬರುವ ಭಾರತೀಯ ಧರ್ಮಮೂಲದ ನಿರಾಶ್ರಿತರನ್ನು ನೋಡಿಕೊಳ್ಳಬೇಕಾದರೂ ತನ್ನ ಈ ಮಹತ್ವದ ಜವಾಬ್ದಾರಿಯನ್ನು ನಿಭಾಯಿಸದೇ ಈ ಎಲ್ಲಾ ವರ್ಷಗಳಿಂದ ತನ್ನ ಕಣ್ಣು ಕಿವಿಗಳನ್ನು ಮುಚ್ಚಿಕೊಂಡು ಹಿಂದೂಗಳು, ಬೌದ್ಧರು, ಜೈನರು ಮತ್ತು ಸಿಕ್ಖರು ಯಾವುದೇ ತೊಂದರೆಗೆ ಸಿಲುಕಿಲ್ಲ ಎಂಬಂತೆ ನಟಿಸುತ್ತಿದೆ. ನಮ್ಮ ಆಸುಪಾಸಿನ ದೇಶಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂ, ಬುದ್ಧ, ಜೈನ ಮತ್ತು ಸಿಕ್ಖ ಜನರ ನರಮೇಧ ನಡೆದಿದ್ದರೂ ನಮ್ಮ ದೇಶದ ನಾಯಕತ್ವದ ಮೇಲೆ ಮತ್ತು ನಾಯಕರ ಆತ್ಮಸಾಕ್ಷಿಯ ಮೇಲೆ ಯಾವುದೇ ರೀತಿಯ ಪರಿಣಾಮ ಆಗಿಲ್ಲವೆಂದರೆ ನಮ್ಮ ರಾಜಕಾರಣದ ಮಾನವೀಯ ಮೌಲ್ಯಗಳು ಎಷ್ಟರ ಮಟ್ಟಿಗೆ ಬಿದ್ದಿದೆ ಎಂಬುದು ಗೋಚರವಾಗುತ್ತದೆ. ಭಾರತೀಯ ಧರ್ಮಮೂಲದ ಯಾವುದೇ ವ್ಯಕ್ತಿ ಅನ್ಯಾಯ ಅಥವಾ ಅತ್ಯಾಚಾರಕ್ಕೆ ಒಳಗಾಗಿ ಭಾರತದ ಆಶ್ರಯ ಯಾಚಿಸಿ ಬಂದರೆ ತನ್ನ ನಾಗರೀಕ ಜವಾಬ್ದಾರಿಯನ್ನು ನಿಭಾಯಿಸುವ ದೃಷ್ಟಿಯಿಂದ ಇವರನ್ನು ನಮ್ಮ ಪ್ರಜೆಗಳನ್ನಾಗಿ ಸ್ವೀಕರಿಸುವುದಕ್ಕೆ ಬೇಕಾಗಿರುವ ಕಾನೂನು ವ್ಯವಸ್ಥೆಯನ್ನು ಮತ್ತು ನೀತಿಗಳನ್ನು ಸಿದ್ಧಪಡಿಸುವ ಸಮಯ ಬಂದಿದೆ.

ಉತ್ತೇಜನಕಾರಿ ವಿಷಯವೇನೆಂದರೆ “ ಭಾರತವು ನಿರಾಶ್ರಿತ ಹಾಗೂ ಅತ್ಯಾಚಾರಕ್ಕೆ ಒಳಗಾದ ಹಿಂದೂಗಳಿಗೆ ನೈಸರ್ಗಿಕ ಆಶ್ರಯ ತಾಣವಾಗಿರುತ್ತದೆ ಮತ್ತು ಇಂತಹ ನಿರಾಶ್ರಿತರು ಇಲ್ಲಿ ಮುಕ್ತವಾಗಿ ಆಶ್ರಯ ಪಡೆಯತಕ್ಕದ್ದು”  ಎಂಬ  ಆಶ್ವಾಸನೆಯನ್ನು ಬಿಜೆಪಿ ಪಕ್ಷವು ತನ್ನ 2014ನೆಯ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದೆ.ಈ ಆಶ್ವಾಸನೆಯನ್ನು ಕಾರ್ಯಗತಗೊಳಿಸುವ ದೃಷ್ಟಿಯಿಂದ 2016ನೆಯ ಸಾಲಿನಲ್ಲಿ ಸರಕಾರವು ಲೋಕಸಭೆಯಲ್ಲಿ ಪೌರತ್ವ ಬಿಲ್ ಒಂದನ್ನು ಪ್ರಸ್ತಾಪನೆ ಮಾಡಿತ್ತು. ಈ ಬಿಲ್ ಸದ್ಯಕ್ಕೆ ಲೋಕಸಭೆಯ ವಿಶೇಷ ಸಮಿತಿಯ ಬಳಿ ಕಾಯ್ದಿರಿಸಲಾಗಿದೆ. ಈ ಬಿಲ್-ನಲ್ಲಿ ಕೆಲ ದೋಷಗಳು ಇವೆ. ಮೊದಲನೆಯದಾಗಿ ಈ ಪ್ರಸ್ತಾಪದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ಮೂಲದ ಜನರಿಗೆ ಮಾತ್ರ ಪೌರತ್ವ ಪಡೆಯುವ ಅವಕಾಶವಿದೆ. ಆದರೆ ಭಾರತೀಯ ಧಾರ್ಮಿಕ ಮೂಲದ ಜನರು ಯಾವ ದೇಶದವರೇ ಆಗಿದ್ದರೂ ಅತ್ಯಾಚಾರಕ್ಕೆ ಒಳಗಾದವರಾದರೇ ಅಂತಹವರಿಗೆ ಆಶ್ರಯ ಸಿಗಬೇಕು. ಎರಡನೆಯದಾಗಿ ಈ ಬಿಲ್-ನಲ್ಲಿ ಕ್ರೈಸ್ತ ಮತಾನುಯಾಯಿಗಳನ್ನು ಸೇರಿಸುವುದಕ್ಕೆ ಯಾವುದೇ ಕಾರಣವಿರಲಿಲ್ಲ. ಕ್ರೈಸ್ತರಿಗೆ ಹಿಂದೂ, ಬೌದ್ಧ, ಜೈನ ಮತ್ತು ಸಿಖ್ ಇವರಂತೆ ಭಾರತ ನೈಸರ್ಗಿಕ ಆಶ್ರಯತಾಣವಲ್ಲ. ಇದಲ್ಲದೆ ವಿಶ್ವದಲ್ಲಿ ನೂರಕ್ಕೂ ಹೆಚ್ಚು ಕ್ರೈಸ್ತ ದೇಶಗಳು ಇವೆ. ಕ್ರೈಸ್ತ ನಿರಾಶ್ರಿತರು ಈ ಯಾವುದೇ ದೇಶಗಳಲ್ಲಿ ಆಶ್ರಯ ಪಡೆಯಬಹುದು. ಮೂರನೆಯದಾಗಿ ಈ ಹೊಸ ಕಾನೂನಿಗೆ ಪೂರಕವಾಗಿ ಸಂವಿಧಾನದಲ್ಲಿ ಯಾವುದೇ ಅವಕಾಶವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಆಕ್ಷೇಪ ನೈಜ ಆಧಾರದ ಮೇಲಿದೆ. ಆದ್ದರಿಂದ ಈ ಕಾನೂನನ್ನು ಜಾರಿಗೊಳಿಸುವ ಮುನ್ನ ಸಂವಿಧಾನದ ತಿದ್ದುಪಡಿ ಮಾಡಿ ಅದರಲ್ಲಿ ಈ ರೀತಿಯ ಕಾನೂನು ವ್ಯವಸ್ಥೆಗೆ ಅವಕಾಶವನ್ನು ಒದಗಿಸತಕ್ಕದ್ದು. ನಾಲ್ಕನೆಯದಾಗಿ ನಮ್ಮ ದೇಶದ ಈಶಾನ್ಯ ಭಾಗದ ಬಾಂಧವರಲ್ಲಿ ಈ ಕಾನೂನಿನ ಬಗ್ಗೆ ಕೆಲವು ಸಂಶಯ ಹಾಗೂ ಆಕ್ಷೇಪಗಳು ಇವೆ. ಅವರ ಆಲೋಚನೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನಿನ ಮುಖಾಂತರ ಬರುವ ವಲಸೆ ಜನರನ್ನು ದೇಶದ ಎಲ್ಲಾ ಭಾಗಗಳಲ್ಲಿ ಆಶ್ರಯಿಸಲಾಗುವುದು ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಸೀಮಿತಗೊಳಿಸಲಾಗದು ಎಂಬ ಆಶ್ವಾಸನೆಯನ್ನು ಕೇಂದ್ರ ಸರಕಾರ ನೀಡಬೇಕು. ಈಗಿನ ಅವತಾರದಲ್ಲಿ ಈ ಬಿಲ್ ಕಾನೂನು ರೂಪ ಪಡೆದರೆ ದೇಶದ ಒಳಗೆ ಅಸಮಾಧಾನ ಮತ್ತು ನ್ಯಾಯಾಲಯಗಳಲ್ಲಿ ಮೊಕದ್ದಮೆಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಇದರಿಂದ ಈಗಾಗಲೇ ತೊಂದರೆಗೆ ಒಳಗಾಗಿರುವ ನಿರಾಶ್ರಿತ ಹಿಂದೂಗಳಿಗೆ ಯಾವುದೇ ರೀತಿಯ ಸಹಾಯವಾಗುವುದಿಲ್ಲ.

ಆದ್ದರಿಂದ ಈ ಕೂಡಲೇ ಸಂವಿಧಾನವನ್ನು ತಿದ್ದುಪಡಿ ಮಾಡಿ ಹೊಸ ಆರ್ಟಿಕಲ್ 11A ಒಂದನ್ನು ಸೇರಿಸುವ ಅಗತ್ಯವಿದೆ. ತದನಂತರ ಕಾನೂನು 1955 ತಿದ್ದುಪಡಿ ಮಾಡಿ ಭಾರತೀಯ ಧಾರ್ಮಿಕ ಮೂಲದ ಹಿಂದೂಗಳು, ಬೌದ್ಧರು, ಜೈನರು ಹಾಗೂ ಸಿಖ್ಖರಿಗೆ ಪೌರತ್ವ ನೀಡುವ ಅವಕಾಶ ಈ ಕಾನೂನಿನಲ್ಲಿ ಕಲ್ಪಿಸಬೇಕು. ಈ ನಿರಾಶ್ರಿತರು ಯಾವುದೇ ದೇಶದವರಾಗಿದ್ದರೂ ಅವರಿಗೆ ಪೌರತ್ವ ನೀಡಬೇಕು. ಇದೇ ಕಾನೂನಿನಲ್ಲಿ ಮತ್ತೊಂದು ತಿದ್ದುಪಡಿಯನ್ನು ಸೇರಿಸಬೇಕು. ಪೌರತ್ವ ಪಡೆದ ನಂತರ ಯಾರಾದರೂ ಭಾರತೀಯ ಮೂಲದ ಧರ್ಮವನ್ನು ತೊರೆದು ಬೇರೆ ಮತಕ್ಕೆ ಮತಾಂತರಗೊಂಡರೆ ಆ ಕೂಡಲೇ ಅವರ ಪೌರತ್ವವನ್ನು ರದ್ದುಗೊಳಿಸಬೇಕು. ನಿರಾಶ್ರಿತರಿಗೆ ಈ ಕಾನೂನಿನಲ್ಲಿ ಪೌರತ್ವ ಕಲ್ಪಿಸುವ ಅವಕಾಶ ಅವರ ಧರ್ಮದ ಆಧಾರದ ಮೇಲೆ ಇರುತ್ತದೆ. ಆದ್ದರಿಂದ ಪೌರತ್ವ ದೊರಕಿದ ನಂತರ ಮತಾಂತರ ಹೊಂದಿದರೆ ಆ ಪೌರತ್ವವನ್ನು ಉಳಿಸಿಕೊಳ್ಳುವ ಹಕ್ಕು ಇರುವುದಿಲ್ಲ. ಈ ರೀತಿಯ ನಡವಳಿಕೆ ಭಾರತ ದೇಶದ ನೈಸರ್ಗಿಕ ಪ್ರಜೆಗಳನ್ನು ಮೋಸ ಮಾಡಿ ಈ ದೇಶದ ಪೌರತ್ವ ಪಡೆಯುವ ದುರ್ಮಾರ್ಗವಾಗಿರುತ್ತದೆ.

ಆದ್ದರಿಂದ ಈ ಕೆಳಗಿನ ವಿಷಯಗಳ ಬಗ್ಗೆ ತಕ್ಷಣ ಕಾರ್ಯನಿರತರಾಗಬೇಕಾಗಿ ತಮ್ಮಲ್ಲಿ ಬೇಡಿಕೊಳ್ಳುತ್ತೇವೆ:

(i) ಪೌರತ್ವ ತಿದ್ದುಪಡಿ ಕಾಯ್ದೆ 2016 ಇದನ್ನು ಹಿಂದಕ್ಕೆ ಪಡೆಯುವುದು.

(ii) ಸಂವಿಧಾನದ ತಿದ್ದುಪಡಿ ಮಾಡಿ ಹೊಸ ಆರ್ಟಿಕಲ್ 11A ಇದನ್ನು ಸೇರಿಸುವುದು

(iii) ಪೌರತ್ವ ಕಾಯ್ದೆ 1955 ಇದನ್ನು ತಿದ್ದುಪಡಿ ಮಾಡಿ ಪೌರತ್ವ ತಿದ್ದುಪಡಿ ಕಾಯ್ದೆ 2018 ಇದನ್ನು ಮಂಜೂರು ಮಾಡಬೇಕು

ಮೇಲಿನ ಎಲ್ಲಾ ಕ್ರಮಗಳನ್ನು ಮುಂಬರುವ ಸಂಸತ್ ಅಧಿವೇಶನದಲ್ಲೇ ಮಾಡಬೇಕು. ಸಂವಿಧಾನದಲ್ಲಿ ಸೇರಿಸಬೇಕಾದ ಆರ್ಟಿಕಲ್ 11A ಈ ಕೆಳಗಿನಂತಿದೆ:

“Article 11-A: Notwithstanding anything contained in this Constitution, and in discharge of civilizational responsibility of India towards the Indian origin religion namely, Hinduism, Buddhism, Jainism and Sikhism, Parliament may by law provide for expeditious granting of citizenship to the persecuted Hindus, Buddhists, Jains and Sikhs from any country. Provided that if a persecuted Hindu, Buddhist, Jain or Sikh who has been granted citizenship converts at any time to any non-Indian origin religion,

i) his citizenship shall become void forthwith;

(ii) he shall stand dismissed forthwith from any public office or public employment;

(iii) all his moveable or immoveable properties shall stand forfeited to Government of India forthwith; and

(iv) he is forbidden from owning or acquiring in any manner any moveable or immoveable property.”

Leave a Reply