ರಿಗೆ,

ಶ್ರೀ ನರೇಂದ್ರ ಮೋದಿ ಅವರು,
ಗೌರವಾನ್ವಿತ ಪ್ರಧಾನ ಮಂತ್ರಿಗಳು, ಭಾರತ
ನವ ದೆಹಲಿ

ವಿಷಯ: ಬಹಳ ಸಮಯದಿಂದ ಮುಂದುವರಿಯುತ್ತಿರುವ ಹಿಂದೂ ಸಮುದಯಾದ ಸಮಸ್ಯೆಗಳ ಪರಿಹಾರದ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕಾದ ವಿಷಯಗಳ ಪಟ್ಟಿಯ ಬಗ್ಗೆ.

ಪರಿಚಯ:

೧. ಭಾರತ ದೇಶದ ಉದ್ದ ಅಗಲದಿಂದಲೂ ಬಂದಿರತಕ್ಕ ನಾವು ಹಿಂದೂಗಳು ಕೆಲ ತಿಂಗಳುಗಳಿಂದ ಹಿಂದೂ ಧರ್ಮ, ಹಿಂದೂ ಸಮಾಜ ಹಾಗೂ ಹಿಂದೂಗಳ ಮೇಲೆ ಆಗುತ್ತಿರುವ ಸಾಂವಿಧಾನಿಕ, ಕಾನೂನು ರೀತ್ಯಾ ಮತ್ತು ಸಾರ್ವಜನಿಕ ನೀತಿ ಮುಖೇನ ತಾರತಮ್ಯದ ಬಗ್ಗೆ ದೀರ್ಘ ಆಲೋಚನೆ ಮತ್ತು ಚರ್ಚೆ ನಡೆಸಿರುತ್ತೇವೆ. ಈ ವಿಚಾರ ವಿಮರ್ಶೆಯ ಅವಭೃತ ಸ್ನಾನ ಈ ವರ್ಷದ ಸೆಪ್ಟೆಂಬರ್ ತಿಂಗಳ ೨೨ನೆ ತಾರೀಖಿನಂದು ನವ ದೆಹಲಿಯಲ್ಲಿ ಸಮಾವೇಶದ ರೀತಿಯಲ್ಲಿ ನಡೆಯಿತು. ಇದರ ಪರಿಣಾಮವೇ ಈ ಹಿಂದೂ ಬೇಡಿಕೆಗಳ ಪಟ್ಟಿ.

೨. ಅಂಕಿ ಅಂಶಗಳ ಆಧಾರದ ಮೇರೆಗೆ ಹಾಗೂ ಸ್ವಂತ ಅನುಭವ ಸಿದ್ಧ ಪ್ರಮಾಣಗಳ ಆಧಾರದ ಮೇರೆಗೆ ಭಾರತ ರಾಜ್ಯವು ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ಬಳುವಳಿಗಳನ್ನು ಪಾಲಿಸುತ್ತಾ ಬಂದಿರುವ ಹಿಂದೂ ಪ್ರಜೆಗಳ ವಿರುದ್ಧ ಉತ್ಸಾಹವರ್ಜಕ ನಡೆವಳಿಕೆ ತೋರುತ್ತಿದೆ ಎಂಬ ಮಾತು ದಿನ ದಿನಕ್ಕೆ ಹೆಚ್ಚಾಗಿ ಕೇಳಿ ಬರುತ್ತಿದೆ. ಪ್ರಸ್ತುತ ಇರುವ ಹಲವು ಸಾಂವಿಧಾನಿಕ ಹಕ್ಕುಗಳನ್ನು ಸರಕಾರಗಳು ಮತ್ತು ನ್ಯಾಯಾಲಯಗಳು ಹಿಂದೂ ವಿರುದ್ಧವಾಗಿ ವ್ಯಾಖ್ಯಾನಿಸುತ್ತಾ ಬಂದಿವೆ. ಉದಾಹರಣೆಗೆ ಆರ್ಟಿಕಲ್ ೨೫ ರಿಂದ ೩೦ರ ವರೆಗೆ. ಇದಲ್ಲದೆ ಹಿಂದೂ ಧರ್ಮ ಮತ್ತು ಹಿಂದೂಗಳ ವಿರುದ್ಧ ಹೋಗುವಂತಹ ಹಲವು ಕಾನೂನುಗಳು ಮತ್ತು ಸಾಂವಿಧಾನಿಕ ತಿದ್ದುಪಡಿಗಳನ್ನು ಜಾರಿಗೆ ತರಲಾಗುತ್ತಿದೆ.

ಈ ರೀತಿಯ ಬಹುಸಂಖ್ಯಾ ವಿರೋಧಿ ತಿದ್ದುಪಡಿಗಳ ಯಾವ ಹಂತಕ್ಕೆ ನಮ್ಮ ಕಾನೂನು ಮತ್ತು ಸಂವಿಧಾನವನ್ನು ತಂದು ನಿಲ್ಲಿಸಿವೆ ಎಂದರೆ

(i) ಹಿಂದೂಗಳಿಗೆ ಮಾತ್ರ ಈ ದೇಶದಲ್ಲಿ ತಮ್ಮ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಡೆಸುವ ಹಸ್ತಕ್ಷೇಪ-ರಹಿತ ಹಕ್ಕು ಇಲ್ಲವಾಗಿದೆ.

(ii) ಹಿಂದೂಗಳಿಗೆ ಮಾತ್ರ ಈ ದೇಶದಲ್ಲಿ ತಮ್ಮ ಧಾರ್ಮಿಕ ಸಂಸ್ಥೆಗಳನ್ನು (ದೇವಸ್ಥಾನ, ಮಠಗಳು) ನಡೆಸುವ ಹಕ್ಕು ಇಲ್ಲದಾಗಿದೆ.

(iii) ಅ-ಹಿಂದೂಗಳಿಗೆ ಮಾತ್ರ ದೊರಕುವ ವಿದ್ಯಾರ್ಥಿವೇತನ ಮತ್ತು ಇತರ ಹಣಕಾಸಿನ ಸೌಲಭ್ಯಗಳು ಹಿಂದೂಗಳಿಗೆ ನಿರಾಕರಿಸಲಾಗುತ್ತಿದೆ.

(iv) ಕೇವಲ ಹಿಂದೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳು ಮತ್ತು ಕಟ್ಟುಪಾಡುಗಳ ಮೇಲೆ ರಾಜ್ಯದ ಮತ್ತು ನ್ಯಾಯಾಲಯಗಳ ಹದ್ದಿನ ಕಣ್ಣು ಬಿದ್ದು ಅವುಗಳ ಆಚರಣೆಗೆ ತೀವ್ರ ಅಡಚಣೆಗಳನ್ನು ತರಲಾಗುತ್ತಿದೆ.

೩. ನಮ್ಮ ಸಂವಿಧಾನ ಈ ದೇಶವನ್ನು ಜಾತ್ಯಾತೀತ ಎಂದು ಪರಿಗಣಿಸಿದೆ. ನಮ್ಮ ಸಂವಿಧಾನ ರಚನೆ ಮಾಡಿದ ಸಾಂವಿಧಾನಿಕ ಸಭೆ ಈ ದೇಶದಲ್ಲಿ ಎಲ್ಲರಿಗೂ ಸಮಾನ ಹಕ್ಕು ದೊರಕಬೇಕು ಮತ್ತು ಧರ್ಮದ ಭೇದ ಅಥವಾ ಪರಿಗಣನೆ ಇಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂಬ ಆದರ್ಶಗಳನ್ನು ವ್ಯಕ್ತಪಡಿಸಿತ್ತು. ಅದೇ ನಮ್ಮ ದೇಶದ ಪ್ರಜಾತಂತ್ರದ ಬುನಾದಿ ಎಂದು ಆಶಿಸಿತ್ತು. ಆದರೆ ಧರ್ಮದ ಆಧಾರದ ಮೇಲೆ ಬಹು-ಸಂಖ್ಯಾಕರನ್ನು ಕೆಲ ಮಟ್ಟದ ಪ್ರಜೆಗಳಂತೆ ಕಾಣುವ ರಾಜ್ಯದ ಮತ್ತು ನ್ಯಾಯಾಲಯಗಳ ಈ ಧೋರಣೆ ಈ ಮೇಲ್ಕಂಡ ಆದರ್ಶಗಳಿಗೆ ಸಂಪೂರ್ಣ ವಿರೋಧವಾಗಿವೆ.

೪. ಈ ರೀತಿಯ ಭೇದಭಾವದಿಂದ ಹಲವು ದುಷ್ಪರಿಣಾಮಗಳಾಗುತ್ತಿವೆ. ಚುನಾವಣೆಗಳಲ್ಲಿ ವಿಭಜನಾತ್ಮಕ ಹಾಗೂ ಕೋಮುವಾದಿ ರಾಜಕೀಯ ನಡೆಸಲು ರಾಜಕಾರಣಿಗಳಿಗೆ ಪ್ರೋತ್ಸಾಹ ಸಿಗುತ್ತಿದೆ. ಇದಲ್ಲದೆ ಹಿಂದೂ ಎಂಬ ನಾಮಫಲಕದೊಂದಿಗೆ ಬರುವ ತೊಂದರೆಗಳನ್ನೆಲ್ಲ ತಪ್ಪಿಸಿಕೊಳ್ಳಲು ಹಿಂದೂ ಸಮಾಜದ ಹಲವು ಜನಾಂಗದವರು ಅ-ಹಿಂದೂ ಅಥವಾ ಅಲ್ಪಸಂಖ್ಯಾತರೆಂಬ ಪಟ್ಟ ಪಡೆಯಲು ಹಾತೊರೆಯುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದರಿಂದ ಸಾಂವಿಧಾನಿಕ, ಕಾನೂನು ರೀತ್ಯ ಮತ್ತು ಸಾರ್ವಜನಿಕ ನೀತಿ ಮುಖೇನ ಸವಲತ್ತುಗಳು ದೊರಕುತ್ತವೆ ಎಂಬ ಲೆಕ್ಕಾಚಾರ ಈ ವರ್ಗದವರದ್ದು! ಕೆಲವು ದಶಕಗಳ ಹಿಂದೆ ರಾಮಕೃಷ್ಣ ಮಿಷನ್ ರವರು ಮತ್ತು ಇತ್ತೀಚಿಗೆ ಲಿಂಗಾಯತ ಬಾಂಧವರು ನಡೆಸಿದ ಪ್ರಯತ್ನಗಳನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಶತಮಾನಗಳಿಂದ ವಿದೇಶಿಯರಿಂದ ಆಗದ ಹಿಂದೂ ಸಮಾಜ ಒಡೆಯುವ ಕಾರ್ಯ ನಮ್ಮದೇ ರಾಜ್ಯ (State) ಇಷ್ಟು ಉತ್ಸಾಹದಿಂದ ನಡೆಸಿತ್ತುರಿವ ಪ್ರಯತ್ನಗಳನ್ನು ನೋಡಿ ಸಾಧಾರಣ ಹಿಂದೂ ಪ್ರಜೆ ಅಚ್ಚರಿಗೊಂಡಿದ್ದಾನೆ. ಅತ್ಯಂತ ಭಯಭೀತನಾಗಿದ್ದಾನೆ.

೫. ಭಾರತೀಯ ರಾಜ್ಯದ ಈ ರೀತಿಯ ಹಿಂದೂ ವಿರೋಧಿ ಧ್ಯೇಯದಿಂದ ಹಿಂದೂ ಸಮಾಜದ ಕಳಕಳಿಯ ಮತ್ತು ವಸ್ತುತಃ ನೈಜ ತೊಂದರೆಗಳನ್ನು ಉತ್ತರೋತ್ತರ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಡೆಗಣಿಸುತ್ತಾ ಬಂದಿವೆ. ಇದರ ಪರಿಣಾಮವಾಗಿ ಹೆಸರಿಗೆ ಬಹು-ಸಂಖ್ಯಾಕ ಧರ್ಮವಾದರೂ ಸ್ವತಂತ್ರ ಭಾರತದಲ್ಲಿ ವಿದೇಶಿ ಆಡಳಿತದ ಅಡಿಯಲ್ಲಿ ಇದ್ದಂತಹ ಕೀಳು ಪರಿಸ್ಥಿಗಿಂತಾ ಕೆಟ್ಟದಾದ ಸ್ಥಿತಿ ಇಂದು ನಮ್ಮ ಧರ್ಮಕ್ಕೆ ಒದಗಿದೆ. ಬಾಹ್ಯವಾಗಿ ಈ ರೀತಿ ಹೇರಲಾಗಿರುವ ಕಡಿವಾಣಗಳಿಂದ ಸನಾತನ ಧರ್ಮವು ತನ್ನನ್ನು ತಾನೇ ಪುನರುಜ್ಜೀವನ ಗೊಲಿಸುವುದರಲ್ಲಿ ಮತ್ತು ಹಿಂದೂ ಜನರ ಆಧ್ಯಾತ್ಮಿಕ ಹಾಗೂ ಕಾಲಿಕ ತೃಷೆಯನ್ನು ಇಂಗಿಸುವುದರಲ್ಲಿ ಅಡಚಣೆ ಅನುಭವಿಸುತ್ತಿದೆ. ಇದರಿಂದ ಧರ್ಮ ವಿರೋಧಿ ಪಂಗಡಗಳ ಬಲವರ್ಧನೆಯಾಗುತ್ತಿದೆ ಮತ್ತು ಸನಾತನ ಧರ್ಮಕ್ಕೆ ಹಾಗೂ ನಮ್ಮ ದೇಶಕ್ಕೆ ಹಾನಿಯಾಗುತ್ತಿದೆ.

೬. ಈ ಸಂದರ್ಭದಲ್ಲಿ ನಮ್ಮ ನಾಗರೀಕತೆಯ ಬಗ್ಗೆ ವಿದ್ವಾಂಸರೊಬ್ಬರು ಹೇಳಿದ ಮಾತು ತುಂಬಾ ಪ್ರಸ್ತುತವಾಗಿದೆ: “ಹಿಂದೂಸ್ತಾನದ ಜೀವ-ನಾಡಿ ಈ ಹಿಂದೂ ಸಂಸ್ಕೃತಿ. ಆದ್ದರಿಂದ ಹಿಂದೂಸ್ತಾನವನ್ನು ರಕ್ಷಿಸಬೇಕಾದರೆ ಮೊದಲಿಗೆ ನಾವು ಹಿಂದೂ ಸಂಸ್ಕೃತಿಯನ್ನು ಪೋಷಿಸಿ ಬೆಳೆಸಬೇಕು. ಹಿಂದೂ ಸಂಸ್ಕೃತಿ ನಷ್ಟವಾದರೆ ಹಿಂದೂ ಸಮಾಜ ನಾಶಗೊಂಡರೆ ಈ ಕೇವಲ ಭೂಗೋಳಿಕ ಪ್ರದೇಶವನ್ನು ಹಿಂದೂಸ್ತಾನ ಎಂದು ಕರೆಯುವುದು ಯಾವುದೇ ರೀತಿಯಲ್ಲಿ ಸಮಂಜಸವಲ್ಲ. ಕೇವಲ ಭೂಗೋಳಿಕ ಪ್ರದೇಶಗಳು ರಾಷ್ಟ್ರ ಎಂದೆನಿಸುವುದಿಲ್ಲ!”

೭. ನಮ್ಮ ಸನಾತನ ಧರ್ಮದಲ್ಲಿ ನೆಲೆ ನಿಂತಿರುವ ನಮ್ಮ ಮಹಾನ್ ನಾಗರೀಕತೆಯ ನೈಸರ್ಗಿಕ ಉತ್ತರಾಧಿಕಾರಿ ಮತ್ತು ರಕ್ಷಕ ಹೊಣೆ ಹೊಂದಿರುವ ಭಾರತ ರಾಜ್ಯಕ್ಕೆ ಈ ಸಂಸ್ಕೃತಿಯನ್ನು ಉಳಿಸಿ, ಪೋಷಿಸಿ, ಬೆಳೆಸುವ ಮತ್ತು ಮುಂದಿನ ಪೀಳಿಗೆಗೆ ಸುಸ್ಥಿತಿಯಲ್ಲಿ ಒಪ್ಪಿಸುವ ಜವಾಬ್ದಾರಿ ಇದೆ. ಆದ್ದರಿಂದ ಇತಿಹಾಸದ ಈ ಮಹತ್ವದ ಘಟ್ಟದಲ್ಲಿ ಬಹುಸಂಖ್ಯಾ ವಿರೋಧಿ ಮತ್ತು ನಾಗರೀಕತಾ ವಿರೋಧಯಾಗಿರುವಂತಹ ಕಾನೂನುಗಳು ಮತ್ತು ನೀತಿಗಳಿಂದ ನಮ್ಮ ನಾಗರೀಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಮೇಲೆ ಮತ್ತೆ ಪುನಃ ಸರಿಪಡಿಸಲಾಗದಂತಹ ಹಾನಿಯಾಗುತ್ತಿದೆ.

೮. ಈ ರೀತಿಯ ಹಾನಿಯಿಂದ ‘ಏಕಂ ಸತ್ ವಿಪ್ರ ಬಹುದಾ ವದಂತಿ’, ‘ವಸುಧೈವ ಕುಟುಂಬಕಮ್’ ಮುಂತಾದ ಧ್ಯೇಯಗಳನ್ನು ನೀಡಿರುವಂತಹ ನಮ್ಮ ಅತ್ಯಂತ ಪ್ರಾಚೀನವಾದ ಮತ್ತು ನಮ್ಮೆಲ್ಲರಿಗೆ ಅತ್ಯಂತ ಹೆಮ್ಮೆಯನ್ನು ಕೊಡುವಂತಹ ಸನಾತನ ಧರ್ಮ ಶೀಘ್ರದಲ್ಲೇ ಈ ಭೂಮಿಯಿಂದ ಮಾಯವಾಗಲಿದೆ ಎಂದರೆ ಉತ್ಪ್ರೇಕ್ಷೆ ಎಂದೆನಿಸದು. ಭಾರತ ರಾಜ್ಯ ತುರ್ತಾಗಿ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳದೇ ಮತ್ತು ಆ ಕ್ರಮಗಳನ್ನು ಸತತವಾಗಿ ನಡೆಸದೇ ಇದ್ದರೆ ಈ ದುರಂತ ನಡೆಯುವುದು ಖಂಡಿತ. ನಮ್ಮ ಸಾಂಸ್ಕೃತಿಕ ಪುನರುತ್ಥಾನ ಆಗುವಂತೆ ಆ ಮುಖೇನ ನಮ್ಮ ಐತಿಹಾಸಿಕ ವೈಭವವನ್ನು ಪಡೆಯುವುದಕ್ಕೆ ಬೇಕಾದ ಸುಮತಿಯುಕ್ತ ಕಾನೂನುಗಳನ್ನು ಮತ್ತು ನೀತಿ ಕ್ರಮಗಳನ್ನು ಜಾರಿಗೊಲಿಸಬೇಕು ಎಂದು ನಾವು ಬೇಡಿಕೆಯಿಡುತ್ತೇವೆ.

೯. ಈ ಮೇಲ್ಕಂಡ ವಿಷಯಗಳ ಬೆಳಕಿನಲ್ಲಿ ಈ ಪತ್ರ ಒಪ್ಪಿಸುತ್ತಿರುವ ನಾವುಗಳು ದೀರ್ಘ ಚರ್ಚೆ ಮತ್ತು ವಿಚಾರ ವಿನಿಮಯದ ನಂತರ ಹಿಂದೂಗಳ ಕೆಲ ಬೇಡಿಕೆಗಳನ್ನು ತಕ್ಷಣದಲ್ಲೇ ಜಾರಿಗೆ ತರಬೇಕಾಗಿ ಒಗ್ಗಟ್ಟಿನಿಂದ ಕೋರಿಕೊಳ್ಳುತ್ತೇವೆ. ಈ ಬೇಡಿಕೆಗಳನ್ನು ಪೂರೈಸುವುದರಿಂದ ಹಿಂದೂಗಳಿಗೆ ಸಾಂವಿಧಾನಿಕ, ಕಾನೂನು ಮತ್ತು ನೀತಿ ವಿಷಯಗಳಲ್ಲಿ ಸಮಾನ ಹಕ್ಕು ದೊರೆಯುತ್ತದೆ ಎಂಬ ಭಾವನೆ ಪುನಃ ಮೂಡಿ ನಮ್ಮ ವಿಷಯಗಳಲ್ಲಿ ಸರಕಾರಕ್ಕೆ ಕಾಳಜಿ ಇದೆ ಎಂಬ ನಿರ್ಧಾರಕ್ಕೆ ಹಿಂದೂ ಸಮಾಜ ಬರಲು 2019ನೇ ಸಾಲಿನ ಸಾರ್ವಜನಿಕ ಮತದಾನದಲ್ಲಿ ವಿಶೇಷ ರೀತಿಯ ಪ್ರಭಾವ ಬೀರುವ ಸಾಧ್ಯತೆ ಇದೆ.

೧೦. ಈ ಬೇಡಿಕೆಗಳ ಪಟ್ಟಿಗೆ ಈ ಕೆಳಗೆ ಹಸ್ತಾಕ್ಷರ ಹಾಕಿರುವವರ ಹೊರತು ಇತರ ಅನೇಕರ ಒಪ್ಪಿಗೆ ಮತ್ತು ಸಹಕಾರ ಇರುತ್ತದೆ. ಅವರೆಲ್ಲರ ಪರವಾಗಿ ನಾವು ಈ ಬೇಡಿಕೆಗಳ ಪಟ್ಟಿ ತಯಾರಿಸುವ ಮತ್ತು ತಮಗೆ ತಲುಪಿಸುವ ಜವಾಬ್ದಾರಿಯನ್ನು ಹೊತ್ತಿರುತ್ತೇವೆ.

Leave a Reply