ನವ ದೆಹಲಿ, ಸೆಪ್ಟೆಂಬರ್ 23, 2018: –

2018ನೇ ಇಸವಿ, ದಿನಾಂಕ ಸೆಪ್ಟೆಂಬರ್ 22ರಂದು ನವ ದೆಹಲಿಯಲ್ಲಿ ದೇಶದ ಹಲವು ಭಾಗಗಳಿಂದ ಸುಮಾರು 100 ಹಿಂದೂಗಳು ಸೇರಿ ಈ ದೇಶದಲ್ಲಿ ಹಿಂದೂ ಸಮಾಜದ ಮೇಲೆ ಸಾಂವಿಧಾನಿಕ, ಕಾನೂನು ಮುಖೇನ ಹಾಗೂ ಸಾರ್ವಜನಿಕ ನೀತಿಗಳ ಕಾರಣದಿಂದ ಆಗುತ್ತಿರುವ ಪರಿಣಾಮದ ಬಗ್ಗೆ ಚರ್ಚೆ ನಡೆಸಿದರು. ವ್ಯವಸ್ಥಿತವಾಗಿ ಹಾಗೂ ಸಾಂಸ್ಥಿಕ ರೀತಿಯಲ್ಲಿ ನಡೆಯುತ್ತಿರುವ ಈ ಹಿಂದೂ ವಿರೋಧಿ ತಾರತಮ್ಯದ ಬಗ್ಗೆ ಅತ್ಯಂತ ಚಿಂತೆಗೊಳಗಾಗಿರುವ ಈ 100 ಹಿಂದೂಗಳಲ್ಲಿ ಆಧ್ಯಾತ್ಮಿಕ ನೇತಾರರು, ಶೈಕ್ಷಣಿಕ ತಜ್ಞರು, ಬರಹಗಾರರು,ಡಾಕ್ಟರಗಳು, ಇಂಜಿನಿಯರ್-ಗಳು, ಮಾಧ್ಯಮ ಪ್ರತಿನಿಧಿಗಳು, ಸಾರ್ವಜನಿಕ ಬುದ್ಧಿ ಜೀವಿಗಳು ಮತ್ತು ಇನ್ನಿತರ ಪ್ರಮುಖ ಪ್ರಜೆಗಳು ಸೇರಿದ್ದರು.

ಚರ್ಚೆಗಳ ಮುಖಾಂತರ ಈ ಗಣ್ಯರು, ಸನಾತನ ಧರ್ಮದ ತಳಹದಿಯಲ್ಲಿ ಬೆಳೆದು ನಿಂತಿರುವ ಈ ನಮ್ಮ ನಾಗರೀಕತೆಯ ಜವಾಬ್ದಾರಿ ಮತ್ತು ಇದನ್ನು ಸಂರಕ್ಷಿಸುವ ಉತ್ತರಾಧಿಕಾರಿಯ ಪದವಿ ಇಂದಿನ ಭಾರತ ರಾಜ್ಯದ, ಅದರಿಂದಾಗಿ ಸ್ವಾಭಾವಿಕವಾಗಿ ಭಾರತ ಸರಕಾರದ, ಮೇಲಿದೆ ಎಂಬ ಸತ್ಯವನ್ನು ಅನುಮೋದಿಸಿತು.

ಇದೇ ಸಮಯದಲ್ಲಿ ಅಧಿಕೃತವಾದ ಬೇಡಿಕೆಗಳ ಪಟ್ಟಿಯೊಂದನ್ನು ಚರ್ಚಿಸಿ ತಯಾರು ಪಡಿಸಲಾಯಿತು ಮತ್ತು ಇದೇ ಬೇಡಿಕೆಗಳನ್ನು ಭಾರತ ಘನ ಸರಕಾರದ ಮುಂದಿಡಬೇಕೆಂದು ನಿರ್ಧರಿಸಲಾಯಿತು. ಆ ಬೇಡಿಕೆಗಳು ಕೆಳಕಂಡಂತಿವೆ:

 1. ಹಿಂದೂಗಳ ವಿರುದ್ಧ ನಡೆದುಬಂದಿರುವ ಕಾನೂನುರೀತ್ಯಾ ಹಾಗೂ ಸಾಂವಿಧಾನಿಕ ಭೇದಭಾವ ಮತ್ತು ತಾರತಮ್ಯ – ಇದರ ಅಂತ್ಯ! ಈ ರೀತಿಯ ಜಾತೀಯ ಭೇದಭಾವ ಎಲ್ಲರನ್ನೂ ಸಮಾನ ರೀತಿಯಲ್ಲಿ ಕಾಣುವ ನಮ್ಮ ಸಂವಿಧಾನದ ಧೋರಣೆಗೆ ವಿರುದ್ಧವಾಗಿದೆ. ಈ ಅನ್ಯಾಯವನ್ನು ಕೊನೆಗೊಳಿಸುವ ಸಲುವಾಗಿ ಈ ನಮ್ಮ ಸಂಘ 2016ನೇ ಇಸವಿಯಲ್ಲಿ ಲೋಕ ಸಭೆಯಲ್ಲಿ ಶ್ರೀ ಸತ್ಯಪಾಲ್ ಸಿಂಗ್ ರವರು ಪ್ರಸ್ತಾವನೆ ಮಾಡಿ ನಂಬರ್ 226/2016 ಇದರ ಅಡಿಯಲ್ಲಿ ಸಲ್ಲಿಸಿರುವ ‘ಪ್ರೈವೇಟ್ ಮೆಂಬರ್ ಬಿಲ್’ ಇದನ್ನು ಮುಂಬರುವ ನವೆಂಬೆರ್ ತಿಂಗಳ ಪಾರ್ಲಿಮೆಂಟ್ ಅಧಿವೇಶನದಲ್ಲೇ ಅಂಗೀಕರಿಸಬೇಕಾಗಿ ಬೇಡಿಕೆಯಿಡುತ್ತದೆ. ಇದರಿಂದ ಈ ಕೆಳಗಿನ ವಿಷಯಗಳಲ್ಲಿ ಹಿಂದೂಗಳಿಗೆ ಸಮಾನ ಹಕ್ಕುಗಳು ಪ್ರಾಪ್ತವಾಗುತ್ತವೆ:
 2. a) ಸರಕಾರದ ಅತಿಯಾದ ಹಸ್ತಕ್ಷೇಪವಿಲ್ಲದೇ ಎಲ್ಲಾ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುವ ಹಕ್ಕು
 3. b) ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದೇವಸ್ಥಾನ, ಮಠಗಳು ಇವುಗಳ ಮೇಲಿನ ನಿಯಂತ್ರಣವನ್ನು ಸರಕಾರದ ಹಸ್ತದಿಂದ ಹಿಂದೂ ಸಮಾಜದ ಕೈಗೆ ವರ್ಗಾವಣೆ
 4. c) ಹಿಂದೂ ಪರಂಪರೆ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವದಕ್ಕೆ ಬೇಕಾದ ಹಕ್ಕು ಮತ್ತು ಸೌಲಭ್ಯಗಳು

ಈ ರೀತಿಯ ಸಮಸ್ಯಗಳನ್ನು ಗುರುತಿಸಿ, ಸಂವಿಧಾನದ ವತಿಯಿಂದಲೇ ಹಿಂದೂ ಸಮಾಜದ ಮೇಲೆ ಕೆಲವು ನಿಬಂಧನೆಗಳನ್ನು ಹೇರಲಾಗಿದೆ ಎಂಬ ಕಟು ಸತ್ಯವನ್ನು ಒಪ್ಪಿ, 1995ರಲ್ಲೇ ದಿವಂಗತ ಸೈಯ್ಯದ್ ಶಹಾಬುದ್ದೀನ್ ರವರು ಲೋಕ ಸಭೆಯಲ್ಲಿ ಸಂವಿಧಾನದ ಆರ್ಟಿಕಲ್ 30ನ್ನು ತಿದ್ದುಪಡಿಗೊಳಿಸಿ ಹಿಂದೂಗಳಿಗೂ ಶೈಕ್ಷಣಿಕ ಸಂಸ್ಥೆ ನಡೆಸುವ ಹಕ್ಕು ನೀಡಬೇಕೆಂದು ಪ್ರಸ್ತಾವಿಸಿದ ‘ಪ್ರೈವೇಟ್ ಮೆಂಬರ್ ಬಿಲ್’ನ ವಿಷಯವನ್ನು ನಮ್ಮ ಸಂಘ ಈ ಸಂದರ್ಭದಲ್ಲಿ ನೆನೆಪು ಮಾಡಿಕೊಂಡಿತು.

 1. ಭಾರತ ದೇಶಕ್ಕೆ ಪ್ರತಿ ವರ್ಷ ವಿದೇಶಿ ಸರಕಾರಗಳ ಸಂಬಂಧವಿರುವ, ಮತ್ತು ಅವುಗಳ ಆಂಗಿಕ ಸಂಸ್ಥೆಗಳ ಸಂಪರ್ಕವಿರುವ ಜನರಿಂದ ಕೋಟಿಗಟ್ಟಲೆ ಹಣ ರವಾನೆಯಾಗುತ್ತಿದೆ. ಈ ದುಡ್ಡಿನ ಬಲದಿಂದ ಆ ವಿದೇಶಿ ಸರಕಾರಗಳಿಗೆ ಅನುಕೂಲವಾಗುವಂತಹ ಪರಿಸ್ಥಿತಿಯನ್ನು ತಯಾರುಮಾಡುವ ದಿಟ್ಟಿನ ಕಾರ್ಯಕ್ರಮಗಳನ್ನು ಕೆಲ ಸ್ಥಳೀಯ ಸಂಸ್ಥೆಗಳು ಹಾಕಿಕೊಳ್ಳುತ್ತಿವೆ. ನಮ್ಮ ಸಮಾಜದಲ್ಲಿ ಆತಂಕ ಉತ್ಪಾದನೆ ಮಾಡುವ ಮತ್ತು ಘರ್ಷಣೆ ತರುವ ಹಾಗೂ ಪ್ರತ್ಯೇಕತಾವಾದಕ್ಕೆ ಪ್ರಚೋದನೆ ಕೊಡುವಂತಹ ಕೆಲಸಗಳಲ್ಲಿ ಕೂಡ ಈ ಹಣ ಉಪಯೋಗಿಸಲಾಗುತ್ತಿದೆ. ಕೇಂದ್ರದಲ್ಲಿ ಯಾವುದೇ ಸರಕಾರವಿರಲಿ, ಅಥವಾ ಈ ಹಣದ ಆಗಮನ ಮತ್ತು ಉಪಯೋಗ ಇವುಗಳ ನಿಯಂತ್ರಣದ ಬಗ್ಗೆ ಸರಕಾರದ ಎಷ್ಟೇ ಪ್ರಯತ್ನವಿರಲಿ, ವರ್ಷದಿಂದ ವರ್ಷಕ್ಕೆ ಈ ಹಣದ ಪ್ರವಾಹ ಹೆಚ್ಚುತ್ತಲೇ ಇದೆ ಹಾಗೆಯೇ ನಮ್ಮ ಆಂತರಿಕ ವಿಚಾರಗಳಲ್ಲಿ ವಿದೇಶಿ ಹಸ್ತಕ್ಷೇಪ ಹೆಚ್ಚುತ್ತಲೇ ಇದೆ ಎಂಬುದು ಈ ಕೆಳಗಿನ ಅಂಕಿ ಅಂಶಗಳಿಂದ ಧೃಡಗೊಳ್ಳುತ್ತದೆ.
ಕ್ರಮ ಸಂಖ್ಯೆ ವರ್ಷ FCRA ಮುಖಾಂತರ ಒಳಬಂದಿರುವ ಹಣ ಉಲ್ಲೇಖ
1 2010-11 Rs. 10,865/- ಕೋಟಿ ರೂ ಎಂ.ಎಚ್.ಎ  L.No. II/21011/58(974)/2017-FCRA-MU ದಿನಾಂಕ 07-11-2017 ರಂದು RTI ಗೆ ಕೊಟ್ಟ ಉತ್ತರ.
2 2011-12 Rs. 11,935/- ಕೋಟಿ ರೂ
3 2012-13 Rs. 12,614/- ಕೋಟಿ ರೂ
4 2013-14 Rs. 14,853/- ಕೋಟಿ ರೂ
5 2014-15 Rs. 15,297/- ಕೋಟಿ ರೂ
6 2015-16 Rs. 17,765/- ಕೋಟಿ ರೂ
7 2016-17 Rs. 18,065/- ಕೋಟಿ ರೂ PIB ಮಾಧ್ಯಮ ಹೇಳಿಕೆ 1 June 2018 ಎಂ.ಎಚ್.ಎ ಇವರಿಂದ

ಪ್ರಾಕೃತಿಕ ವಿಕೋಪ ಮುಂತಾದ ಯಾವುದೇ ಸಂದರ್ಭಗಳಲ್ಲಿ ಬೇಕಾದ ಹಣವನ್ನು ಒಟ್ಟುಗೂಡಿಸುವ ಶಕ್ತಿ ನಮ್ಮ ದೇಶದಲ್ಲೇ ಇದೆ, ಹಾಗೂ ಇಂತಹ ಸಂದರ್ಭಗಳನ್ನು ಎದುರಿಸುವುದು ನಮ್ಮ ಸ್ವಾಭಿಮಾನದ ವಿಷಯ, ಎಂಬ (ಅತ್ಯಂತ ಶ್ಲಾಘನೀಯ) ಧೋರಣೆಗಳಿಂದ ಸರಕಾರ ವಿದೇಶಿ ಸಹಾಯವನ್ನು ಮುಂಚಿನಿಂದಲೂ ನಿರಾಕರಿಸುತ್ತಾ ಬಂದಿದೆ. ಯಾವುದೇ ದೇಶ ಉಚಿತವಾಗಿ ಸಹಾಯ ಎಂದೂ ಮಾಡುವುದಿಲ್ಲ. ಈ ರೀತಿಯಲ್ಲಿ FCRA ಮುಖಾಂತರ ಹಣ ಕಳುಹಿಸುವ ವಿದೇಶಿ ಸರಕಾರಗಳು ಇಲ್ಲಿ ಯಾವುದಾದರೂ ವಿಭಜನೀಯ ಕಾರ್ಯಕ್ರಮ ಹಂಚಿಕೊಂಡೇ ತೀರುತ್ತವೆ. ಆದ್ದರಿಂದ ಈಗಿರುವ FCRA ಕಾನೂನನ್ನು ತಕ್ಷಣ ಹಿಂದಕ್ಕೆ ಪಡೆದುಕೊಂಡು, ಹೊಸದಾದ ‘Foreign Contributions (Prohibition) Act’ ಕಾನೂನನ್ನು ತಂದು, OCI ಪ್ರಜೆಗಳ ಹೊರತು ಇನ್ನಾರಿಂದಲೂ ಹಣ ದೇಶದ ಒಳಗೆ ಬರದಂತೆ ಮಾಡಬೇಕೆಂದು ನಮ್ಮ ಸಂಘ ಸರಕಾರವನ್ನು ಆಗ್ರಹಗೊಳಿಸುತ್ತದೆ.

 1. ನಮ್ಮ ಹಿಂದೂ ಧರ್ಮದ, ಹಾಗೂ ಸ್ಥಳೀಯ ಸಾಂಸ್ಕೃತಿಕ, ಪದ್ಧತಿಗಳನ್ನು, ಕಟ್ಟುಪಾಡುಗಳನ್ನು ಮತ್ತು ಚಿಹ್ನೆಗಳನ್ನು ಸರಕಾರದ ಅಥವಾ ಅದರ ಯಾವುದೇ ಅಂಗದ ಹಸ್ತಕ್ಷೇಪದಿಂದ ಹೊರಗಿಟ್ಟು ಈ ವಿಧಿಗಳನ್ನು ಸಂರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ಕೇಂದ್ರ ಸರಕಾರವು ಈ ಕೂಡಲೇ ‘Freedom of Religion Act’ ಒಂದನ್ನು ಜಾರಿಗೊಳಿಸಬೇಕಾಗಿ ನಮ್ಮ ಸಂಘ ಬೇಡಿಕೆ ಇಡುತ್ತದೆ.
 2. ಕಾಶ್ಮೀರದ ಹಿಂದೂಗಳ ಸಾಮೂಹಿಕ ನಿರ್ನಾಮ ಹಾಗೂ ಅವರಿಗೆ ಆಗುತ್ತಿರುವ ಕಿರುಕುಳ ಇವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕೆಳಗಿನ ಬೇಡಿಕೆಗಳನ್ನು ನಮ್ಮ ಸಂಘ ಮುಂದಿಡುತ್ತದೆ:
 3. a) ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮೂರು ಭಾಗಗಳನ್ನಾಗಿ ಮಾಡಿ ಕಾಶ್ಮೀರ, ಲಡಾಖ್ ಮತ್ತು ಜಮ್ಮು ಎಂಬ ಮೂರು ಪ್ರತ್ಯೇಕ ರಾಜ್ಯಗಳನ್ನು ಸ್ಥಾಪಿಸಬೇಕು.
 4. b) ಕಾಶ್ಮೀರದ ಸಮಸ್ಯೆಗೆ ಮೂಲ ಕಾರಣವಾಗಿರುವ ಆರ್ಟಿಕಲ್ 370 ಇದನ್ನು ಕೂಡಲೇ ರದ್ದು ಮಾಡಬೇಕು. ಇದರೊಂದಿಗೆ ‘Constitution Order (Application to J&K) 1954’ ಇದನ್ನು ಕೂಡ ಸರಿಪಡಿಸಿ ಇದರ ಮುಖಾಂತರ ಮಾಡಲಾಗಿರುವ ಆರ್ಟಿಕಲ್ 35A ಈ ಕಾನೂನನ್ನು ಕೂಡ ರದ್ದು ಪಡಿಸಬೇಕು.
 5. ಈ ಕಳೆದ 2017-18ನೇ ಸಾಲಿನಲ್ಲಿ ಭಾರತ ದೇಶ 14 ಲಕ್ಷ ಟನ್ ಮಾಂಸ/ಗೋಮಾಂಸವನ್ನು ರಫ್ತು ಮಾಡಿ ಜಗತ್ತಿನಲ್ಲೇ ಅತಿ ಹೆಚ್ಚು ಮಾಂಸ ರಫ್ತು ಮಾಡುವ ದೇಶ ಎಂಬ ನಾಚಿಕೆಗೇಡು ಕಿರೀಟವನ್ನು ಪಡೆದಿದೆ. ಇದು ನಮ್ಮ ಸಂವಿಧಾನದ ಆರ್ಟಿಕಲ್ 48ಗೆ ವಿರುದ್ಧ ಕೂಡ. ಇದರಿಂದಾಗಿ ಮಾಂಸ/ಗೋಮಾಂಸದ ಬೆಲೆ ಗಗನಕ್ಕೇರಿರುವುದಲ್ಲದೆ ಮಾಂಸ ಮಾಫಿಯಾಗಳ ಕಿರುಕುಳ ಹೆಚ್ಚಾಗುವುದಕ್ಕೆ ಕಾರಣವಾಗಿದೆ. ನಮ್ಮ ಸಂಘ ಮಾಂಸ/ಗೋಮಾಂಸದ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹ ಪಡಿಸುತ್ತದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಇದರಿಂದಾಗಿ ಮಾಂಸದ ಲಭ್ಯತೆ ಹೆಚ್ಚಾಗಿ ಬೆಲೆ ಕಡಿಮೆಯಾಗುತ್ತದೆ. ಪರಿಸರದ ಮೇಲಾಗುವ ದುಷ್ಪರಿಣಾಮ ಕೂಡ ಕಮ್ಮಿಯಾಗುವುದಲ್ಲದೇ ಸಾಮಾಜಿಕ ಘರ್ಷಣೆ ಕೂಡ ನಿಯಂತ್ರಣಗೊಂಡು ಕಾನೂನು ಸುವ್ಯವಸ್ಥೆ ಹೆಚ್ಚಾಗುತ್ತದೆ.
 6. ಭಾರತ ದೇಶದಲ್ಲಿ ಇಂದು ಸಹಸ್ರಾರು ದೇವಸ್ಥಾನಗಳು ಮತ್ತು ಹಿಂದೂ ಧಾರ್ಮಿಕ ಸ್ಥಳಗಳು ಹಾಳುಗೊಂಡು ಗತಿಯಿಲ್ಲದೇ ಪಾಳು ಕಟ್ಟಡಗಳಂತೆ ನಿಂತಿವೆ. ಇದಲ್ಲದೆ ನಮ್ಮ ಸಂಸ್ಕೃತಿಯ ಸಂರಕ್ಷಣೆ ಹಾಗೂ ಬೆಳವಣಿಗೆಗೆ ಬೇಕಾದ ವೇದ ಪಾಠಶಾಲೆಗಳು, ನಾಡ ಕಲೆಗಳು, ಸಾಹಿತ್ಯ, ನೃತ್ಯ, ಸಂಗೀತ, ಚಿತ್ರಕಲೆ, ಕೆತ್ತನೆ ಕಲೆ ಮುಂತಾದ ಮಾಧ್ಯಮಗಳು ಪ್ರೋತ್ಸಾಹ ವರ್ಜಿತವಾಗಿ, ಅವುಗಳನ್ನು ಅಭ್ಯಾಸಿಸುವವರಿಗೆ ದೊರಕದ ಸಹಾಯದಿಂದಾಗಿ, ನೆಲಕಚ್ಚಿವೆ. ಆದ್ದರಿಂದ ನಮ್ಮ ಸಂಘ ಸರಕಾರಕ್ಕೆ ತನ್ನ ನಾಗರೀಕತೆಯ ಸಂರಕ್ಷಣೆಯ ಜವಾಬ್ದಾರಿಯನ್ನು ನೆನಪುಮಾಡುತ್ತಾ ಅದರೊಂದಿಗೆ ತಕ್ಷಣದಲ್ಲೇ ‘ಹೈಂದವ ಸಂಸ್ಕೃತಿ ಜೀರ್ಣೋದ್ಧಾರಣ ನಿಗಮ’ ಎಂಬ ಸಾರ್ವಜನಿಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂದು ಆಗ್ರಹ ಪಡಿಸುತ್ತದೆ. ಈ ಸಂಸ್ಥೆಯ ಸ್ಥಾಪನೆಯ ಸಮಯದಲ್ಲಿ ಕಡಿಮೆಯಂದರೆ 10000 ಕೋಟಿ ರೂಪಾಯಿಯ ನಿಧಿಯನ್ನು ಮಂಜೂರು ಮಾಡಬೇಕು. ಪ್ರತಿ ವರ್ಷ ಇದೇ ಮೊತ್ತವನ್ನು ಕೊಡಬೇಕು. ಈ ನಿಧಿಯ ಸಹಾಯದಿಂದ ಹೈಂದವ ನಿಗಮವು ಪಾಳು ಬಿದ್ದಿರುವ ದೇವಸ್ಥಾನಗಳ ಪುನರುತ್ಥಾನದ ಕೆಲಸವನ್ನು ಕೈಗೊಳ್ಳಬೇಕು. ಇದರೊಂದಿಗೆ ನಮ್ಮ ಪವಿತ್ರ ತೀರ್ಥ ಸ್ಥಳಗಳ ಪುನರ್ಜೀವನ, ವೈದಿಕ ಪಾಠಶಾಲೆಗಳ ನವೀಕರಣ ಮತ್ತು ಇತರ ಸಾಂಸ್ಕೃತಿಕ ಕಲೆಗಳ ಪುನರ್ಚೇತನ ಈ ದಿಕ್ಕಿನಲ್ಲಿ ನಿಗಮವು ಕೆಲಸ ಮಾಡಬೇಕು.
 7. ಈಗಿನ BJP ಸರಕಾರವು ತನ್ನ 2014 ಎಲೆಕ್ಷನ್ ಮಾನಿಫೆಸ್ಟೋನಲ್ಲಿ ‘ಭಾರತವು ವಿಶ್ವದ ಯಾವುದೇ ಭಾಗದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಹಿಂದೂಗಳಿಗೆ ಮನೆಯಾಗಿರುತ್ತದೆ; ಭಾರತದಲ್ಲಿ ಬೇರೆ ದೇಶದ ಹಿಂದೂಗಳಿಗೆ ಶರಣು ಸಿಗುತ್ತದೆ’ ಎಂಬ ಘೋಷಣೆಯನ್ನು ಸೇರಿಸಿತ್ತು. ಇದರಂತೆ 2016ನೇ ಸಾಲಿನಲ್ಲಿ ಕೇಂದ್ರ ಸರಕಾರವು ಲೋಕ ಸಭೆಯಲ್ಲಿ ‘Citizenship Act’ ತಿದ್ದುಪಡಿ ಕಾಯ್ದೆಯನ್ನು ಪ್ರಸ್ತಾವಿಸಿತ್ತು. ಇದನ್ನು ಸದ್ಯದಲ್ಲಿ ‘select commitee’ಯ ಪರಿಷ್ಕರಣೆಗೆ ಒಳಪಡಿಸಲಾಗಿದೆ. ಆದರೆ ಈ ಕಾಯ್ದೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಂವಿಧಾನಕ್ಕೆ ವಿರೋಧವಾಗುವಂತಹ ಸಾಧ್ಯತೆಗಳು ಕಾಣಿಸುತ್ತಿವೆ. ಇದರ ಜೊತೆಯಲ್ಲೇ ನಮ್ಮ ಈಶಾನ್ಯ ಭಾಗದ ಪ್ರತಿನಿಧಿಗಳು ಕೂಡ ಈ ಕಾಯ್ದೆಯ ಬಗ್ಗೆ ಕೆಲವು ಆಕ್ಷೇಪಗಳನ್ನು ಪ್ರಕಟಪಡಿಸಿದ್ದಾರೆ. ಆದ್ದರಿಂದ ನಮ್ಮ ಸಂಘ ಈ ಕೆಳಗಿನ ಬೇಡಿಕೆಗಳನ್ನು ಮುಂದಿಡುತ್ತದೆ:
 8. a) ‘Citizenship (Amendment) Bill, 2016’ – ಈ ಕಾಯ್ದೆಯನ್ನು ತಕ್ಷಣದಲ್ಲೇ ಕೈ ಬಿಡಬೇಕು
 9. b) ಸಂವಿಧಾನದ ಆರ್ಟಿಕಲ್ 11ಗೆ ಈ ಮೇಲಿನ ಉದ್ದೇಶವನ್ನು ಪೂರೈಸುವ ತಿದ್ದುಪಡಿಯನ್ನು ಆರ್ಟಿಕಲ್ 11-A ಎಂಬ ಹೊಸ ಪರಿಷ್ಕರಣೆಯ ಮುಖೇನ ಸೇರಿಸಬೇಕು
 10. c) ತದನಂತರ ‘Citizenship (Amendment) Bill, 2018’ ಎಂಬ ಹೊಸ ಕಾಯ್ದೆ ತಂದು ನವೆಂಬರ್ ತಿಂಗಳ ಅಧಿವೇಶನದಲ್ಲೇ ಪ್ರಸ್ತಾವಿಸಿ ಕಾನೂನಾಗಿ ಪರಿವರ್ತಿಸಬೇಕು
 11. ನಮ್ಮ ದೇಶದಲ್ಲಿ ಎಲ್ಲಾ ಭಾರತೀಯ ಭಾಷೆಗಳಿಗೆ ಪೂರಕವಾಗುವಂತಹ ವಾತಾವರಣವನ್ನು ಸೃಷ್ಟಿಮಾಡಬೇಕು. ಎಲ್ಲಾ ಭಾಷೆಗಳು ಸಮಾನರೀತಿಯಲ್ಲಿ ಬೆಳೆಯುವಂತಹ ಕ್ರಮಕೈಗೊಳ್ಳಬೇಕು. ಇದರಿಂದಾಗಿ ದೇಶದ ಆರ್ಥಿಕ ಹಾಗೂ ಸಾಂಸ್ಕೃತಿಕ ಪುನರುತ್ಥಾನದ ಹಾದಿ ಸುಗಮಗೊಳ್ಳಳಿದೆ. ಭಾಷೆಯ ಆಧಾರದಲ್ಲಿ ನಡೆಯುತ್ತಿರುವ ತಾರತಮ್ಯ ಮತ್ತು ಭೇದಭಾವ ಈ ನೀತಿಯಿಂದ ಕೊನೆಗೊಂಡು ಎಲ್ಲಾ ಪ್ರಾಂತ್ಯಗಳಿಗೂ ಸಮಾನ ಬೆಳವಣಿಗೆ ಹಾಗೂ ನ್ಯಾಯ ದೊರಕಲಿದೆ.

ಭಾರತದ ಪ್ರಜಾತಂತ್ರದ ಆರೋಗ್ಯ ಹಾಗೂ ಹುರುಪಿಗೆ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ – ಇವುಗಳು ಅತಿ ಮುಖ್ಯ. ಈ ಮುಖ್ಯ ತತ್ತ್ವಗಳ ಪೋಷಣೆಗೆ ನಮ್ಮ ಸಂಘ ಸೂಚಿಸಿರುವ ಬೇಡಿಕೆಗಳು ಪೂರಕವಾಗಲಿವೆ. ನಮ್ಮ ಬೇಡಿಕೆಗಳು ಪ್ರಮುಖ ಹಿಂದೂ ಪ್ರಜೆಗಳಿಂದ ತಯಾರಿಸಲಾಗಿದೆ ಹಾಗೂ ನಿರ್ದಿಷ್ಟ ಸಲಹೆಗಳು, ಸೂಚನೆಗಳು ಮತ್ತು ನೀತಿ ಮಾರ್ಗಗಳನ್ನು ಒಳಗೊಂಡಿವೆ. ಈ ಬೇಡಿಕೆಗಳ ಮುಖ್ಯ ಉದ್ದೇಶ ಎಲ್ಲಾ ಪ್ರಜೆಗಳಿಗೆ ಸಮಾನ ಅಧಿಕಾರಗಳು ಮತ್ತು ಹಕ್ಕುಗಳನ್ನು ಗಳಿಸಿಕೊಡುವುದು. ಇವನ್ನು ಒಪ್ಪಿಕೊಂಡು ಕಾರ್ಯರೂಪಕ್ಕೆ ತರುವುದರಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರ ಗಣ್ಯರ ಇಚ್ಛೆಯಂತೆ ರೂಪ ಗೊಂಡ ನಮ್ಮ ಸಂವಿಧಾನ ಮತ್ತು ಕಾನೂನುಗಳು ಇನ್ನೂ ಹೆಚ್ಚು ಪುಷ್ಟಿಗೊಂಡು ನಿಜವಾದ ಅರ್ಥದಲ್ಲಿ ಜಾತ್ಯತೀತ ಮತ್ತು ಪ್ರಜಾಪರವಾಗಲಿದೆ.

ಸಿ. ಸುರೇಂದ್ರನಾಥ್, ಚೆನ್ನೈ

Dr ಹರಿತ ಪುಸರ್ಲ, ನವ ದೆಹಲಿ

Dr ಈಶಂಕುರ್ ಸೈಕಿಯ, ಗುವಾಹಾಟಿ

Dr ಭರತ್ ಗುಪ್ತ, ನವ ದೆಹಲಿ

ತಪನ್ ಘೋಷ್, ಕೋಲ್ಕತ್ತಾ

(ಸಂಘದ ಎಲ್ಲರಿಗಾಗಿ ಮತ್ತು ಎಲ್ಲರ ಪರವಾಗಿ)

Leave a Reply